Posts

Showing posts from November, 2022

Perfection through Practice

Image
- By  Lakshmikant A rjuna was young and still a student of Guru Drona. His mother Kunti had taken special care that her children always ate dinner in good light. One day, a heavy storm extinguished all oil lamps during dinner time. But Arjuna, despite the darkness, discovered that his hand reached his mouth effortlessly and the reason was practice. He started practising archery during the night also. He ended up becoming the best archer of his time.  Practice results in perfection. * * * ಅಭ್ಯಾಸದ ಮೂಲಕ ಪರಿಪೂರ್ಣತೆ - ಎನ್ ಜಯಶ್ರೀ ಶರ್ಮ ಚಿ ಕ್ಕ ವಯಸ್ಸಿನ ಅ ರ್ಜುನ ಗುರು ದ್ರೋಣಾಚಾರ್ಯರ ಶಿಷ್ಯ. ತಾಯಿ ಕುಂತಿಗೆ ಮಕ್ಕಳ ಬಗ್ಗೆ ವಿಶೇಷ ಕಾಳಜಿ. ತನ್ನ ಮಕ್ಕಳು ರಾತ್ರಿ ಭೋಜನವನ್ನು ಉತ್ತಮವಾದ ಬೆಳಕಿನಲ್ಲಿ ಸೇವಿಸಲೆಂದು ಪ್ರಖರವಾದ ಎಣ್ಣೆಯ ದೀಪಗಳನ್ನು ಹಚ್ಚಿ ಬೆಳಕಿನ ವ್ಯವಸ್ಥೆ ಮಾಡುತ್ತಿದ್ದಳು. ಒಂದು ದಿನ ಮಕ್ಕಳೆಲ್ಲರೂ ಭೋಜನ ಸವಿಯುವ ವೇಳೆ ಚಂಡಮಾರುತವೊಂದು ಅಪ್ಪಳಿಸಿ ಹಚ್ಚಿಟ್ಟಿದ್ದ ದೀಪಗಳೆಲ್ಲವೂ ನಂದಿಹೋದವು. ಕತ್ತಲೆಯ ಹೊರತಾಗಿಯೂ ಪ್ರಯತ್ನವಿಲ್ಲದೆ ತನ್ನ ಕೈಯಲ್ಲಿದ್ದ ತುತ್ತು ಬಾಯಿಗೆ ಹೋಗುತ್ತಿರುವುದನ್ನು ಅರಿತ ಅರ್ಜುನ ಇದಕ್ಕೆ ಕಾರಣ ಅಭ್ಯಾಸ ಎಂಬುದನ್ನು ಕಂಡುಕೊಂಡ. ಈ ಘಟನೆಯ ನಂತರ ಬಿಲ್ಲ...

ಅಧ್ಯಾರೋಪ -- ಅಪವಾದ

Image
ಲಕ್ಷ್ಮೀಕಾಂತ್  ಶ್ರೀ ಮಂತ ವರ್ತಕನೊಬ್ಬ ಸಾಯುವ ಮುನ್ನ ತನ್ನ ಒಡೆತನದಲ್ಲಿದ್ದ ಹದಿನೇಳು ಆನೆಗಳನ್ನು ಅವನ ಮೂವರು ಮಕ್ಕಳು ಹಂಚಿಕೊಳ್ಳುವಂತೆ ಉಯಿಲು ಬರೆದ. ಉಯಿಲಿನ ಪ್ರಕಾರ ಹದಿನೇಳು ಆನೆಗಳಲ್ಲಿ ಹಿರಿಯ ಪುತ್ರನಿಗೆ ಅರ್ಧಭಾಗ, ಮಧ್ಯಮ ಪುತ್ರನಿಗೆ ಮೂರನೇ ಒಂದು ಭಾಗ, ಹಾಗೂ ಕಿರಿಯ ಪುತ್ರನಿಗೆ ಒಂಭತ್ತನೇ ಒಂದು ಭಾಗವೆಂದಿತ್ತು. ಈ ರೀತಿ ಹಂಚಿಕೊಳ್ಳುವುದು ಒಂದು ದೊಡ್ಡ ತಲೆನೋವಾಗಿ ಪರಿಣಮಿಸಿತು. ಉಯಿಲಿನ ಪ್ರಕಾರ ಹಿರಿಯ ಪುತ್ರನಿಗೆ ಎಂಟೂವರೆ ಆನೆಗಳು, ಮಧ್ಯಮ ಪುತ್ರನಿಗೆ ಐದು ಮತ್ತು ಮೂರರಲ್ಲಿ ಎರಡರಷ್ಟು ಆನೆಗಳು, ಕಿರಿಯ ಪುತ್ರನಿಗೆ ಒಂದರ ಜೊತೆಗೆ ಒಂಭತ್ತರಲ್ಲಿ ಎಂಟು ಭಾಗದಷ್ಟು ಆನೆ ಬರುತಿತ್ತು. ಸಮಸ್ಯೆ ಬಗೆಹರಿಸಲು ರಾಜ್ಯದಲ್ಲಿ ಬುದ್ಧಿವಂತರೆಂದು ಹೆಸರು ಪಡೆದ ಮುಖ್ಯ ನ್ಯಾಯಾಧೀಶರ ಬಳಿ ಅನುಸಂಧಾನ ಮಾಡಿ, ಅವರ ಸಲಹೆ ಪಡೆಯಲು ತೀರ್ಮಾನಿಸಿದರು. ನ್ಯಾಯಾಧೀಶರು ತಮ್ಮ ಒಂದು ಆನೆಯನ್ನು ಅವರಿಗೆ ಎರವಲು ಕೊಟ್ಟು, ಉಯಿಲಿನ ಪ್ರಕಾರ ಆನೆಗಳನ್ನು ಹಂಚಿಕೊಳ್ಳುವಂತೆ ಸಲಹೆ ನೀಡಿದರು. ಅದರಂತೆ ಈಗ ಹಿರಿಯ ಪುತ್ರನಿಗೆ ಒಂಭತ್ತು ಆನೆಗಳು, ಮಧ್ಯಮ ಪುತ್ರನಿಗೆ ಆರು ಆನೆಗಳು, ಹಾಗೂ ಕಿರಿಯ ಪುತ್ರನಿಗೆ ಎರಡು ಆನೆಗಳು ಬಂದವು. ಒಟ್ಟು ಹದಿನೇಳು ಆನೆಗಳು. ವಿವೇಕವುಳ್ಳ ಬುದ್ಧಿವಂತ ನ್ಯಾಯಾಧೀಶ ತಮ್ಮ ಅನೆಯೊಂದಿಗೆ ಹಿಂತಿರುಗಿದರು. ಅತಿಕ್ರಮಿಸಿ ಹಿಂತೆಗೆದುಕೊಳ್ಳುವ ಈ ಪ್ರಕ್ರಿಯೆ, ಅದ್ವ್ಯೆತ ವ್ಯಾಖ್ಯಾನದಲ್ಲಿ ಅಧ್ಯಾರೋಪ--ಅಪವಾದ ಎಂಬ ಶೀರ್...