ಅಧ್ಯಾರೋಪ -- ಅಪವಾದ

ಲಕ್ಷ್ಮೀಕಾಂತ್ 
ಶ್ರೀ
ಮಂತ ವರ್ತಕನೊಬ್ಬ ಸಾಯುವ ಮುನ್ನ ತನ್ನ ಒಡೆತನದಲ್ಲಿದ್ದ ಹದಿನೇಳು ಆನೆಗಳನ್ನು ಅವನ ಮೂವರು ಮಕ್ಕಳು ಹಂಚಿಕೊಳ್ಳುವಂತೆ ಉಯಿಲು ಬರೆದ. ಉಯಿಲಿನ ಪ್ರಕಾರ ಹದಿನೇಳು ಆನೆಗಳಲ್ಲಿ ಹಿರಿಯ ಪುತ್ರನಿಗೆ ಅರ್ಧಭಾಗ, ಮಧ್ಯಮ ಪುತ್ರನಿಗೆ ಮೂರನೇ ಒಂದು ಭಾಗ, ಹಾಗೂ ಕಿರಿಯ ಪುತ್ರನಿಗೆ ಒಂಭತ್ತನೇ ಒಂದು ಭಾಗವೆಂದಿತ್ತು. ಈ ರೀತಿ ಹಂಚಿಕೊಳ್ಳುವುದು ಒಂದು ದೊಡ್ಡ ತಲೆನೋವಾಗಿ ಪರಿಣಮಿಸಿತು. ಉಯಿಲಿನ ಪ್ರಕಾರ ಹಿರಿಯ ಪುತ್ರನಿಗೆ ಎಂಟೂವರೆ ಆನೆಗಳು, ಮಧ್ಯಮ ಪುತ್ರನಿಗೆ ಐದು ಮತ್ತು ಮೂರರಲ್ಲಿ ಎರಡರಷ್ಟು ಆನೆಗಳು, ಕಿರಿಯ ಪುತ್ರನಿಗೆ ಒಂದರ ಜೊತೆಗೆ ಒಂಭತ್ತರಲ್ಲಿ ಎಂಟು ಭಾಗದಷ್ಟು ಆನೆ ಬರುತಿತ್ತು. ಸಮಸ್ಯೆ ಬಗೆಹರಿಸಲು ರಾಜ್ಯದಲ್ಲಿ ಬುದ್ಧಿವಂತರೆಂದು ಹೆಸರು ಪಡೆದ ಮುಖ್ಯ ನ್ಯಾಯಾಧೀಶರ ಬಳಿ ಅನುಸಂಧಾನ ಮಾಡಿ, ಅವರ ಸಲಹೆ ಪಡೆಯಲು ತೀರ್ಮಾನಿಸಿದರು. ನ್ಯಾಯಾಧೀಶರು ತಮ್ಮ ಒಂದು ಆನೆಯನ್ನು ಅವರಿಗೆ ಎರವಲು ಕೊಟ್ಟು, ಉಯಿಲಿನ ಪ್ರಕಾರ ಆನೆಗಳನ್ನು ಹಂಚಿಕೊಳ್ಳುವಂತೆ ಸಲಹೆ ನೀಡಿದರು. ಅದರಂತೆ ಈಗ ಹಿರಿಯ ಪುತ್ರನಿಗೆ ಒಂಭತ್ತು ಆನೆಗಳು, ಮಧ್ಯಮ ಪುತ್ರನಿಗೆ ಆರು ಆನೆಗಳು, ಹಾಗೂ ಕಿರಿಯ ಪುತ್ರನಿಗೆ ಎರಡು ಆನೆಗಳು ಬಂದವು. ಒಟ್ಟು ಹದಿನೇಳು ಆನೆಗಳು. ವಿವೇಕವುಳ್ಳ ಬುದ್ಧಿವಂತ ನ್ಯಾಯಾಧೀಶ ತಮ್ಮ ಅನೆಯೊಂದಿಗೆ ಹಿಂತಿರುಗಿದರು.

ಅತಿಕ್ರಮಿಸಿ ಹಿಂತೆಗೆದುಕೊಳ್ಳುವ ಈ ಪ್ರಕ್ರಿಯೆ, ಅದ್ವ್ಯೆತ ವ್ಯಾಖ್ಯಾನದಲ್ಲಿ ಅಧ್ಯಾರೋಪ--ಅಪವಾದ ಎಂಬ ಶೀರ್ಷಿಕೆಯೊಂದಿಗೆ ಪ್ರಖ್ಯಾತವಾಗಿದೆ.

* * * * *

Superimposition - Retraction

A wealthy merchant passed away leaving behind a will, to divide the seventeen elephants he owned among his three sons, specifying that his eldest must get half of those, the middle deserves to find one-third and the youngest should be allowed to have one-ninth.

Dividing the animals in the above order became tricky. According to it, the eldest son was supposed to have eight-and-a-half, the middle one was rightful to get five-and-two-third, and the youngest son commanded the eligibility to get one-and-eight-divided-by-nine.

They approached the chief justice of the kingdom, who was well-known for his wisdom. He loaned one of his own elephants to them and asked them to avail their shares according to the will.

The situation was eased, as the eldest son got nine, the middle son had custody of six, and the youngest son happily owned two elephants - total arriving at seventeen exactly! The wise chief justice returned with his own elephant, tactically avoiding the endurance of any waiting time to get back his loan!!!

This process in Advaita interpretation is defined as Superimposition followed by Retraction (adhyAropa - apavAda)

Comments

Popular posts from this blog

Unbound-13

Unbound-12

Unbound-8