Satya, Dharma and Karma



The story of Satyakama - Jabali and sage Gautama (Chandogya Upnishad)

- By Lakshmikant

Indian philosophies are very, very intricate. The story of Satyakama Jabali is known to most Indians. 

Satyakama is a Dasiputra; his mother Jabali raises him herself. He wants to join as a pupil (Shishya) in the gurukul of sage Gautama. Sage Gautama asks for Satyakama's gotra. Satyakama replies that according to his mother, his father cannot be identified. His frank expression pleases Gautama, and he accepted Satyakama as his Shishya. 

1. Satyakama Jabali had the courage of conviction to reveal this unpalatable truth despite the consequences. Mother and son lived in Satyam Vada. 

2. Gautama's action of admitting Satyakama into his gurukul shows his courage of conviction in practising and living Dharma. 

3 Gautama's action demonstrates the doctrine of karma 

Friends and relatives will be part of one's journey till death. The only companion after death is his/her Dharma.

*****

ಸತ್ಯ, ಧರ್ಮ ಮತ್ತು ಕರ್ಮ

ಸತ್ಯಕಾಮ-ಜಾಬಾಲಿ-ಗೌತಮ ಮಹರ್ಷಿಗಳ ಕಥೆ (ಛಾಂದೋಗ್ಯ ಉಪನಿಷತ್ತು)

ಭಾರತೀಯ ತತ್ವಶಾಸ್ತ್ರವು ಬಹಳ ಸಂಕೀರ್ಣವಾಗಿದೆ.

ಸತ್ಯಕಾಮ ಜಾಬಾಲಿ ಬಹುತೇಕ ಭಾರತೀಯರಿಗೆ ಗೊತ್ತಿರುವ ಕಥೆ. ಸತ್ಯಕಾಮ ಜಾಬಾಲಿ ಎಂಬುವಳ ದಾಸಿಪುತ್ರ, ಹಾಗಾಗಿ ಅವನ ಲಾಲನೆ ಪಾಲನೆಯ ಜವಾಬ್ದಾರಿಯನ್ನು ಅವನ ತಾಯಿಯೇ ಹೊತ್ತು ಅವನನ್ನು ದೊಡ್ಡವನನ್ನಾಗಿ ಮಾಡುತ್ತಾಳೆ.

ಗೌತಮ ಮಹರ್ಷಿಗಳ ಆಶ್ರಮ ಸೇರಿ ವಿದ್ಯೆ ಕಲಿಯಬೇಕೆಂದು ಸತ್ಯಕಾಮ ಅಪೇಕ್ಷಿಸುತ್ತಾನೆ.  ಅವರ ಶಿಷ್ಯನಾಗಬೇಕೆಂಬ ಹಂಬಲಿಕೆ ಹೊತ್ತು ಅವರ ಆಶ್ರಮಕ್ಕೆ ಬರುತ್ತಾನೆ. ಗೌತಮರು ಇವನನ್ನು ತಮ್ಮ ಶಿಷ್ಯನಾಗಿ ಸ್ವೀಕರಿಸುವುದಕ್ಕೆ ಮೊದಲು ಇವನ ಗೋತ್ರ, ಪ್ರವರವನ್ನು ಅರುಹುವಂತೆ ಸೂಚಿಸುತ್ತಾರೆ.

ಸತ್ಯಕಾಮ ತನ್ನ ತಾಯಿಯ ಪ್ರಕಾರ, ತನ್ನ ತಂದೆ ಯಾರೆಂದು ಗುರುತಿಸಲಾಗದು ಎಂದು ಸತ್ಯವನ್ನು ನುಡಿಯುತ್ತಾನೆ.

ಸತ್ಯ ನುಡಿದ ಇವನನ್ನು ಗೌತಮರು  ಶಿಷ್ಯನನ್ನಾಗಿ ಸ್ವೀಕರಿಸುತ್ತಾರೆ.

೧) ಸತ್ಯಸಂಧತೆಯ ಪರಿಣಾಮಗಳನ್ನು ಅರಿತಿದ್ದೂ ಸತ್ಯಕಾಮ ಇಂಥ ಅಸಹ್ಯಕರ ಸತ್ಯವನ್ನು ಬಹಿರಂಗಪಡಿಸುತ್ತಾನೆ.

ತಾಯಿ ಮತ್ತು ಮಗ ಸತ್ಯವಂತರಾಗಿ ಜೀವಿಸುತ್ತಾರೆ.

೨) ಗೌತಮ ಮಹರ್ಷಿಗಳು  ಸತ್ಯಕಾಮನನ್ನು ತನ್ನ ಶಿಷ್ಯನನ್ನಾಗಿ ಗುರುಕುಲದಲ್ಲಿ ಸೇರಿಸಿಕೊಂಡಿದ್ದು ಅವರ ಮನವರಿಕೆಯ ಧ್ಯೆರ್ಯ ಮತ್ತು ಬದುಕಿನಲ್ಲಿ ಅವರು ಆಚರಿಸಿದ ಧರ್ಮವನ್ನು ಎತ್ತಿ ಹಿಡಿಯುತ್ತದೆ.

೩) ಗೌತಮರ ಈ ಕ್ರಮ ಕರ್ಮದ ಸಿದ್ದಾಂತವನ್ನು ತಿಳಿಸುತ್ತದೆ. ಸ್ನೇಹಿತರು ಮತ್ತು ಬಂಧುಗಳು ನಮ್ಮ ಜೀವನದ ಪ್ರಯಾಣದಲ್ಲಿ ನಾವು ಸಾಯುವವರೆಗೂ ನಮ್ಮ ಜೊತೆಯಲ್ಲಿರುತ್ತಾರೆ, ಆದರೆ ಸತ್ತ ನಂತರ ನಮ್ಮ ಜೊತೆ ಬರುವುದು ಧರ್ಮ ಮಾತ್ರ ಎಂದು ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೇಳುತ್ತಾನೆ.

Comments

Post a Comment

Popular posts from this blog

Unbound-13

Unbound-12

Unbound-8